ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ಶಾಶ್ವತ ನೀರಾವರಿ ಹೋರಾಟವನ್ನು ಬೆಂಬಲಿಸಲು ಗುರುವಾರ ನಗರದಿಂದ ಸಾವಿರಾರು ಬೈಕ್ಗಳಲ್ಲಿ ಜನರು ಚಿಕ್ಕಬಳ್ಳಾಪುರದ ಕಡೆಗೆ ತೆರಳಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಜಮಾಯಿಸಿದ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬೈಕ್ ಸವಾರರು, ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ದಾರಿಯುದ್ದಕ್ಕೂ ಅಲ್ಲಲ್ಲಿ ನೀರಾವರಿ ಹೋರಾಟಗಾರರನ್ನು ಹೂಗಳನ್ನು ಚೆಲ್ಲಿ ಸ್ವಾಗತಿಸಲಾಯಿತು. ವಿ.ಮುನಿಯಪ್ಪ ಅವರ ಅಭಿಮಾನಿಗಳ ಬಳಗ ಎಂದು ಬರೆದಿದ್ದ ಹಾಗೂ ವಿ.ಮುನಿಯಪ್ಪ ಅವರ ಭಾವಚಿತ್ರವಿದ್ದ ಟಿ.ಶರ್ಟ್ ಧರಿಸಿದ್ದ ಜನರು ಬೈಕ್ಗಳಲ್ಲಿ ಸಾಗುತ್ತಾ ಶಾಶ್ವತ ನೀರಾವರಿ ಜಾರಿಯಾಗುವವರೆಗೂ ಹೋರಾಟ ನಿಲ್ಲದು ಎಂದು ಘೋಷಣೆಗಳನ್ನು ಕೂಗಿದರು.
ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಬಜೆಟ್ನಲ್ಲಿ ನೀರಾವರಿ ಯೋಜನೆಗೆ ಹಣವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ನೀರಾವರಿ ಅಗತ್ಯತೆಯನ್ನು ವಿವರಿಸಿ ಮನವಿಯನ್ನು ಜಿಲ್ಲಾಧಿಕಾರಿಗಲಿಗೆ ಸಲ್ಲಿಸುವುದಾಗಿ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಿಂದ, ಟಿ.ಬಿ.ರಸ್ತೆ, ಕಾಂಗ್ರೆಸ್ ಭವನ ರಸ್ತೆ, ಉಲ್ಲೂರುಪೇಟೆ, ಬೈಪಾಸ್ ರಸ್ತೆಯನ್ನು ಹಾದು ಚಿಕ್ಕಬಳ್ಳಾಪುರದ ರಸ್ತೆಯಲ್ಲಿ ಬೈಕ್ ರ್ಯಾಲಿಯನ್ನು ಮುನ್ನಡೆಸಲಾಯಿತು. ಹಂಡಿಗನಾಳ ಗ್ರಾಮದಲ್ಲಿ ಬೈಕ್ ರ್ಯಾಲಿಗೆ ವಿಶೇಷ ಸ್ವಾಗತವನ್ನು ಏರ್ಪಡಿಸಲಾಗಿತ್ತು.
- Advertisement -
- Advertisement -
- Advertisement -
- Advertisement -