ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್‌ಮಿಲಾದ್ ಪ್ರಯುಕ್ತ ರಕ್ತದಾನ ಶಿಬಿರವನ್ನು ಆಯೋಜಿಸಿ ಅತಿ ಹೆಚ್ಚು ಅಂದರೆ 750 ಯೂನಿಟ್ ರಕ್ತವನ್ನು ರೆಡ್ ಕ್ರಾಸ್ ಸಂಸ್ಥೆಗೆ ಸಂಗ್ರಹಿಸಿಕೊಡುವ ಮೂಲಕ ದಾಖಲೆ ಮಾಡಿದ್ದೇವೆ. ಈ ಬಾರಿಯೂ ಡಿಸೆಂಬರ್ 14 ರ ಬುಧವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ. ಈ ಬಾರಿ ಕಳೆದ ದಾಖಲೆಗಳಿಗಿಂತ ಹೆಚ್ಚು ರಕ್ತವನ್ನು ಸಂಗ್ರಹಿಸುವ ಮೂಲಕ ಶಿಡ್ಲಘಟ್ಟವನ್ನು ಮಾನವೀಯತೆ, ಸಮಾನತೆ, ಐಕ್ಯತೆಯ ನಗರವೆಂಬ ಖ್ಯಾತಿ ತರಲು ಶ್ರಮಿಸುತ್ತಿರುವುದಾಗಿ ಹೇಳಿದರು.
ಯೂನಿಟಿ ಸಿಲ್‌ಸಿಲಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸದ್ ಮಾತನಾಡಿ, ಈ ಬಾರಿ ರಕ್ತದಾನ ಶಿಬಿರದೊಡನೆ ರಕ್ತದಾನದ ಕುರಿತು ಜನಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಇದುವರೆಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ದಂತ ಚಿಕಿತ್ಸಾ ಶಿಬಿರ, ಟಿ.ಬಿ ಚಿಕಿತ್ಸಾ ಶಿಬಿರ, ಪಲ್ಸ್ ಪೋಲಿಯೋ ಕಾರ್ಯಕ್ರಮ, ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದೇವೆ. 33 ಮಂದಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದು, 90 ಲಕ್ಷ ರೂಗಳಷ್ಟು ಹಣ ತಾಲ್ಲೂಕಿಗೆ ಉಳಿಸಿದಂತಾಗಿದೆ. ಆರೋಗ್ಯ ಭಾಗ್ಯ ಯೋಜನೆಯನ್ನು ಬಡವರಿಗೆ ತಲುಪಿಸಲು ನೆರವಾಗುತ್ತಿದ್ದೇವೆ. ಶೈಕ್ಷಣಿಕವಾಗಿ ತಾಲ್ಲೂಕಿನ ಮಕ್ಕಳಿಗೆ ನೆರವಾಗಲು ಮುಂದಿನ ಶೈಕ್ಷಣಿಕ ವರ್ಷದಿಂದ ತಾಂತ್ರಿಕ ತರಬೇತಿ ಶಿಬಿರಗಳು, ಉತ್ತಮ ಬರವಣಿಗೆ, ಜ್ಞಾಪಕ ಶಕ್ತಿ ವೃದ್ಧಿಗಾಗಿ ಶೀಬಿರಗಳನ್ನು ನಡೆಸುವುದಾಗಿ ವಿವರಿಸಿದರು.
ಯೂನಿಟಿ ಸಿಲ್‌ಸಿಲಾ ಫೌಂಡೇಶನ್ ಕಾರ್ಯದರ್ಶಿ ಇಮ್ತಿಯಾಜ್ ಪಾಷ, ಅಕ್ರಂಪಾಷ, ಮುದಸಿರ್‌ಪಾಷ, ರಹಮತ್‌ಪಾಷ, ಜಬೀವುಲ್ಲ, ಅಮೀರ್‌ಪಾಷ, ಜಹೀರ್‌ಪಾಷ, ಮೊಹಮ್ಮದ್‌ಫಾರುಕ್, ಸಯ್ಯದ್ ತೌಫೀಕ್, ಶಬ್ಬೀರ್‌ಪಾಷ, ಶಂಷೀರ್ ಪಾಷ, ಗೌಸ್‌ಖಾನ್ ಆಮೀರಿ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -