ತಾಲ್ಲೂಕು ಕಸಾಪ ವತಿಯಿಂದ ಜಾನಪದ ದತ್ತಿ ಕಾರ್ಯಕ್ರಮ

Sidlaghatta KaSaPa Program Garudadri School

ಶಿಡ್ಲಘಟ್ಟ ನಗರದ ಕನಕನಗರದ ಗರುಡಾದ್ರಿ ಆಂಗ್ಲ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಜಾನಪದ ದತ್ತಿ ಕಾರ್ಯಕ್ರಮದಲ್ಲಿ ಸಾಹಿತಿ ಕಾಗತಿ ವೆಂಕಟರತ್ನಂ ಅವರು ಮಾತನಾಡಿದರು.

ಇಂದಿನ ಮಕ್ಕಳಿಗೆ ಕನ್ನಡದ ಮಹತ್ವವನ್ನು ಪ್ರಾಥಮಿಕ ಶಿಕ್ಷಣದಿಂದಲೇ ತಿಳಿಸುವುದರಿಂದ ಭಾಷಾ ಉಜ್ವಲತೆಗೆ ಸಹಕಾರಿಯಾಗಲಿದೆ. 2 ಸಾವಿರ ವರ್ಷಗಳಷ್ಟು ಭವ್ಯವಾದ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಶ್ರೀಮಂತ ಹಾಗೂ ಸಮೃದ್ಧವಾದುದು. ಈ ಭಾಷೆಯ ಮೂಲಕವೇ ಪ್ರತಿಯೊಬ್ಬರು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆವಿಗೂ ಅಭ್ಯಾಸವನ್ನು ಮಾಡಿ ಜ್ಞಾನ ಸಂಪನ್ನರಾಗುತ್ತಿದ್ದರು ಎಂದು ತಿಳಿಸಿದರು.

ಕನ್ನಡ ಭಾಷೆಯು ಸರಳವೂ, ಸುಂದರವೂ, ಸುಮಧುರವೂ ಆಗಿ ಎಲ್ಲರ ಬಾಯಲ್ಲಿ ಬಹುಬೇಗನೇ ಹರಿದಾಡುವುದು. ಅಂಥಹ ಮಧುರ ಕನ್ನಡ ಭಾಷೆಯ ಸವಿಯನ್ನು ಸವಿಯುತಿಹ ನಾವು ನಿಜವಾಗಿಯೂ ಭಾಗ್ಯವಂತರೇ ಸರಿ ಎಂದರು.

ಇತರ ಭಾಷಿಕರಿಗೆ ಹೋಲಿಸಿದರೆ ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲಿನ ಅಭಿಮಾನ ಕಡಿಮೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು, ಕನ್ನಡ ಸಾಹಿತ್ಯಲೋಕ ಸಮೃದ್ಧವಾಗಿದೆ. ಕನ್ನಡದ ಭಾಷೆ, ನೆಲಕ್ಕೆ ಹೊರ ರಾಜ್ಯದ ಜನರ ಪ್ರಭಾವ, ಕನ್ನಡ ಭಾಷೆಗೆ ಇತರ ಭಾಷೆಯಿಂದ ದಾಳಿ ಮುಂದುವರೆದಿದ್ದು ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದರು.

ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು. ಬದಲಾಗಿ ಇನ್ನೊಂದು ಭಾಷೆಯನ್ನು ವಿರೋಧಿಸುವುದು, ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಹ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ. ನಾವು ರಾಷ್ಟ್ರಕವಿ ಕುವೆಂಪು ಆಶಿಸಿರುವಂತೆ ವಿಶ್ವಮಾನವರಾಗಿ ಕನ್ನಡ ಉಳಿಸಿ ಬೆಳಸುವ ಕಾರ್ಯವನ್ನು ಮಾಡಬೇಕಾಗಿದೆ. ನಾವೆಲ್ಲರೂ ಒಟ್ಟಾಗಿ ಕನ್ನಡವನ್ನು ಸಕಾರಾತ್ಮಕವಾಗಿ ಬೆಳಸುವ ದಿಶೆಯಲ್ಲಿ ನಿರಂತರವಾಗಿ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

ರಾಜ್ಯಮಟ್ಟದ ಖ್ಯಾತ ಜನಪದ ಗಾಯಕ ದೇವರಮಳ್ಳೂರು ಡಿ.ಎಂ.ಮಹೇಶ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಯ ಕುರಿತಾದ ಗೀತೆಗಳು, ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಹಾಡಿದರು.

ಈ ಸಂದರ್ಭದಲ್ಲಿ ಕಸಾಪ ವತಿಯಿಂದ ಸಾಹಿತಿ ಕಾಗತಿ ವೆಂಕಟರತ್ನಂ ಮತ್ತು ಜಾನಪದ ಗಾಯಕ ಮಹೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಕಾಗತಿ ವೆಂಕಟರತ್ನಂ ಅವರು ತಮ್ಮ “ಕರುನಾಡ ಸಾರಸ್ವತ ತಪಸ್ವಿಗಳು” ಕೃತಿಯನ್ನು ಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.

ಪ್ರಾಂಶುಪಾಲ ಪುರುಷೋತ್ತಮ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಶಾಲಾ ಸಿಬ್ಬಂದಿ ಗಾಯತ್ರಿ, ರಜನಿ, ಸಾನಿಯಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
https://www.sidlaghatta.com

📱 Join WhatsApp
https://wa.me/917406303366?text=Hi

Leave a Reply

Your email address will not be published. Required fields are marked *

error: Content is protected !!