ಜೂನ್ 30 ರ ಒಳಗೆ ಕಂದಾಯ ಪಾವತಿಸಿ

0
257
Sidlaghatta Municipality Property Tax Deadline June 30

ಶಿಡ್ಲಘಟ್ಟ ನಗರದ ಆಸ್ತಿದಾರರು ಏಪ್ರಿಲ್ 30 ರ ಒಳಗೆ ಕಂದಾಯ ಪಾವತಿಸಿದಲ್ಲಿ ಶೇ 5 ರಷ್ಟು ರಿಯಾಯಿತಿ ನೀಡಲಾಗಿತ್ತು. ಚುನಾವಣೆಯ ಕಾರಣದಿಂದಾಗಿ ಕೆಲವೇ ಮಂದಿ ಕಂದಾಯ ಪಾವತಿಸಿದ್ದಾರೆ. ಮೇ 1 ರಿಂದ ಜೂನ್ 30 ರ ಒಳಗೆ ಕಂದಾಯ ಪಾವತಿಸಿದ್ದಲ್ಲಿ ದಂಡವನ್ನು ವಿಧಿಸುವುದಿಲ್ಲ. ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ಕಂದಾಯ ಪಾವತಿಸಿ ಎಂದು ಪೌರಾಯುಕ್ತ ಶ್ರೀಕಾಂತ್ ತಿಳಿಸಿದ್ದಾರೆ.

ನಗರಸಭೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಹುತೇಕ ಆಸ್ತಿದಾರರು ನೀರಿನ ಕಂದಾಯ ಸೇರಿದಂತೆ ಇತರೆ ಕಂದಾಯವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಎಲ್ಲರೂ ನಿಗದಿತ ಅವಧಿಯೊಳಗೆ ಪಾವತಿಸಿ ದಂಡ ಹಾಕಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ನಗರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.

ನಗರಸಭೆಯ ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!