S Devaganahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಸ್. ದೇವಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಜೆ.ಡಿ.ಎಸ್ ಬೆಂಬಲಿತ ಎನ್. ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಇದ್ದ ಉಪಾಧ್ಯಕ್ಷ ಗಂಗಾಧರ್ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದರಿಂದಾಗಿ ಚುನಾವಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸೂಯಮ್ಮ, ಮುಖಂಡರಾದ ನರಸಿಂಹ ರೆಡ್ಡಿ, ವಿಜಯಕುಮಾರ, ವೇಣು, ಮಂಜುನಾಥ್, ಅಶ್ವಥ್ ರೆಡ್ಡಿ, ಗಂಗಾಧರ್, ನಾಗರಾಜು, ಲಕ್ಷ್ಮೀನಾರಾಯಣ ರೆಡ್ಡಿ, ನಾಗರಾಜ್, ನರಸಿಂಹಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಚುನಾವಣೆ ಅಧಿಕಾರಿ ನರೇಂದ್ರ, ಪಿ ಡಿ ಓ ಮಹೇಶ್, ಸಿಬ್ಬಂದಿ ಮತ್ತು ಕಾರ್ಯದರ್ಶಿ ಹಾಜರಿದ್ದರು.